Contact: 7337837977
Address Harisha’s Health and wellness center No 26, 1st floor, 3rd cross, beside old govindappa bekary Next to Liberty Showroom, Thindi katte hotel building 1st floor, Sunkadakatte, google Map Location 👇
https://maps.app.goo.gl/bZCh9cUSYPvGegJo6
This building 1st floor
Timings 9:30am to 8pm (ಸಮಯ)
2 to 3 Lunch break
Wednesday is Holiday
(ಬುಧವಾರ ರಜೆ ದಿನ)
ದಿನನಿತ್ಯವೂ ಒ೦ದಿಷ್ಟು ತಲೆಗೂದಲು ಉದುರುವುದು ನಿಮ್ಮ ಗಮನಕ್ಕೆ ಬ೦ದಿದೆಯೆ೦ದಾದರೆ ಚಿ೦ತಿಸಬೇಡಿರಿ. ಏಕೆಂದರೆ ಈ ಸಮಸ್ಯೆಯನ್ನು ಎದುರಿಸುತ್ತಿರುವವರು ನೀವೊಬ್ಬರೇ ಏನೂ ಅಲ್ಲ. ಪ್ರತಿದಿನವೂ ಜನರು ಸರಾಸರಿ ಸುಮಾರು 50 ರಿ೦ದ 100 ರಷ್ಟು ತಲೆಗೂದಲನ್ನು ಕಳೆದುಕೊಳ್ಳುತ್ತಾರೆ ಎ೦ಬುದನ್ನು ಚರ್ಮಶಾಸ್ತ್ರಜ್ಞರೂ ಸಹ ಒಪ್ಪಿಕೊಳ್ಳುತ್ತಾರೆ. ಕಳೆದುಹೋದ ತಲೆಗೂದಲ ಸ್ಥಾನವನ್ನು ಹೊಸತಾಗಿ ಬೆಳೆಯುವ ಕೂದಲು ತು೦ಬುತ್ತದೆಯಾದ್ದರಿ೦ದ ಇದೊ೦ದು ಅತೀ ಸಾಮಾನ್ಯವಾದ ಸ೦ಗತಿಯೇ ಆಗಿದೆ.
ಆದರೆ ಕೂದಲ ಬೆಳವಣಿಗೆಗೆ ಹಲವು ರೀತಿಯ ಪೋಷಕಾಂಶಗಳ ಅಗತ್ಯವಿದೆ ಎಂಬುದನ್ನು ಮರೆಯದಿರಿ. ನಮ್ಮ ಆಹಾರದ ಮೂಲಕ ಸೇವಿಸುವ ಹಲವು ಪೋಷಕಾಂಶಗಳು ಕೂದಲ ಆರೈಕೆಗೆ ಒಳಗಿನಿಂದ ನೆರವಾದರೆ ಕೂದಲ ಬುಡಕ್ಕೆ ಹಚ್ಚುವ ತೈಲ ಮತ್ತು ಇತರ ಪ್ರಸಾಧನಗಳಿಂದ ಹೊರಗಿನಿಂದ ನೆರವು ದೊರಕುತ್ತದೆ. ಅಲ್ಲದೆ ಕೆಲವೊಮ್ಮೆ ಸೂಕ್ತ ಆರೈಕೆಯಿಲ್ಲದಿದ್ದಲ್ಲಿ ಕೂದಲುದುರುವ ಸಂಖ್ಯೆಹೆಚ್ಚಿ ಹೊಸ ಕೂದಲು ಹುಟ್ಟುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಇರುವ ಕೂದಲುಗಳೂ ಮಂಕಾದ ಹೊಳಪು ಮೊದಲಾದ ತೊಂದರೆಗಳಿಂದ ಶಿಥಿಲವಾಗುತ್ತವೆ. ಕೂದಲು ಉದುರುವಿಕೆ ತಡೆಯಲು ನೈಸರ್ಗಿಕ 5 ವಿಧಾನಗಳು
ಸಾಮಾನ್ಯವಾಗಿ ಇವೆಲ್ಲದಕ್ಕೂ ಕೆಲವು ನಗರಗಳಲ್ಲಿರುವ ನಲ್ಲಿಗಳಲ್ಲಿ ಬರುವ ಗಡಸು ನೀರಿನಿಂದ ಕೂದಲನ್ನು ತೊಳೆದುಕೊಳ್ಳುವಾಗ ನೀರಿನ ಗುಣಮಟ್ಟವೂ ಕೂದಲನ್ನು ಶಿಥಿಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಡಸು ನೀರಿನಲ್ಲಿ ಕರಗಿರುವ ಹಲವು ಲೋಹ ಮತ್ತು ಖನಿಜಗಳ ಕಾರಣ ಕೂದಲು ತನ್ನ ಹೊಳಪು ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಬನ್ನಿ ಈ ತೊಂದರೆಗಳಿಂದ ನಿವಾರಣೆ ಪಡೆಯಲು ಹಲವು ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ ನಿಮ್ಮ ಕೂದಲನ್ನು ಆಗಾಗ ತೊಳೆಯುವುದು ಸೂಕ್ತವೇ ?
ದಾಸವಾಳ ಹೂವು, ನೋಡುಗರ ಕಣ್ಮನಗಳನ್ನು ತನ್ನ ಸೌಂದರ್ಯದಿಂದಲೇ ತನ್ನತ್ತ ಸೆಳೆಯುವ ಒಂದು ಸುಂದರವಾದ ಹೂವು. ಇತರ ಹೂವುಗಳಿಗಿಂತ ಸ್ವಲ್ಪ ಅಗಲವಾಗಿ ಮೂಡಿ ಬಂದು ಒಂದೆಳೆಯಲ್ಲಿ ಅರಳುವ ಈ ಹೂವು ಝೇಂಕಾರದಿಂದ ಓಡಾಡುವ ದುಂಬಿಗಳನ್ನು ಕೂಡ ತನ್ನತ್ತ ಆಕರ್ಷಣೆ ಮಾಡುತ್ತದೆ. ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹಾರ ಮಾಡುವ ಅದ್ಭುತ ಗುಣ ಲಕ್ಷಣ ದಾಸವಾಳ ಹೂವಿಗೆ ಇದೆ. ಪ್ರಾಚೀನ ಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಇದು ಸಾಬೀತಾ
ಕೂದಲಿನ ಉತ್ತಮ ಆರೋಗ್ಯಕ್ಕೆ ದಾಸವಾಳ
ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳೆಂದರೆ ತಲೆ ಹೊಟ್ಟು, ಬಿಳಿ ಕೂದಲು, ಕೂದಲು ಉದುರುವಿಕೆ ಮತ್ತು ನೆತ್ತಿಯ ಸೋಂಕು. ಇದರ ಜೊತೆಗೆ ಬೊಕ್ಕು ತಲೆಯ ಸಮಸ್ಯೆ ಹೊಂದಿರುವವರು ಹಲವರಿದ್ದಾರೆ. ಮಾರುಕಟ್ಟೆಯಲ್ಲಿ ಅನೇಕ ಕೂದಲು ಆರೈಕೆ ಉತ್ಪನ್ನಗಳು ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿ ಈಗಾಗಲೇ ತಲೆಯೆತ್ತಿವೆ.
ನೈಸರ್ಗಿಕ ವಿಧಾನದಲ್ಲಿ ಹೇಳುವುದಾದರೆ ಕೆಲವೊಂದು ಮನೆ ಮದ್ದುಗಳು ನಿಮಗೆ ಈ ವಿಷಯದಲ್ಲಿ ಸಹಾಯ ಮಾಡುತ್ತವೆ. ಅಂತಹ ಒಂದು ವಸ್ತು ಎಂದರೆ ಅದು ನಿಸರ್ಗದ ಮಡಿಲಲ್ಲಿ ಪ್ರಶಾಂತವಾಗಿ ಬೆಳೆಯುವ ದಾಸವಾಳ ಹೂವು. ದಾಸವಾಳ ಹೂವು ಮತ್ತು ಅದರ ಎಲೆಗಳಿಂದ ಕೂದಲಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ 5 ವಿಧಾನಗಳು ಇಲ್ಲಿವೆ.
ಕೂದಲಿನ ಸಂಪೂರ್ಣ ಪೋಷಣೆಗೆ ದಾಸವಾಳ ಎಣ್ಣೆ
ಕೂದಲಿನ ಉತ್ತಮ ಬೆಳವಣಿಗೆಗೆ ಹೇರ್ ಆಯಿಲ್ ನಿಂದ ಮಸಾಜ್ ಮಾಡುವುದು ಒಂದು ಉತ್ತಮ ವಿಧಾನ. ಅದರಲ್ಲೂ ಪೌಷ್ಟಿಕ ಸತ್ವಗಳನ್ನು ಹೊಂದಿದ ಎಣ್ಣೆ ಕೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿ. ದಾಸವಾಳದ ಎಣ್ಣೆಯಲ್ಲಿ ಕೂದಲಿಗೆ ಅವಶ್ಯವಾಗಿ ಬೇಕಾದ ಪೌಷ್ಟಿಕಾಂಶಗಳು ಇವೆ. ವಾರಕ್ಕೆ ಎರಡು ಬಾರಿಯಾದರೂ ಎಣ್ಣೆಯಿಂದ ನಿಮ್ಮ ತಲೆಯ ನೆತ್ತಿಯ ಭಾಗವನ್ನು ಮಸಾಜ್ ಮಾಡಿ. ದಾಸವಾಳ ಎಣ್ಣೆಯನ್ನು ನೀವೇ ಸ್ವತಃ ಮನೆಯಲ್ಲಿ ಹೇಗೆ ತಯಾರಿಸಬೇಕೆಂದು ಈಗ ನೋಡೋಣ.
ಮೊದಲಿಗೆ 10 ದಾಸವಾಳ ಹೂವುಗಳು ಮತ್ತು 10 ದಾಸವಾಳ ಗಿಡದ ಎಲೆಗಳನ್ನು ತೆಗೆದುಕೊಳ್ಳಿ. *ಇವೆರಡನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
*ಒಂದು ಪ್ಯಾನ್ ನಲ್ಲಿ 1 ಕಪ್ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಬಿಸಿ ಮಾಡಿ ರುಬ್ಬಿದ ಪೇಸ್ಟ್ ಅನ್ನು ಅದಕ್ಕೆ ಹಾಕಿ.
*ಈ ಮಿಶ್ರಣವನ್ನು 2 – 3 ನಿಮಿಷಗಳವರೆಗೆ ಸ್ವಲ್ಪ ಬಿಸಿ ಮಾಡಿ.
*ನಿಮ್ಮ ಸಾವಯುವ ದಾಸವಾಳ ಎಣ್ಣೆ ಈಗ ಬಳಸಲು ತಯಾರಾಗಿದೆ.
*ಈ ಎಣ್ಣೆಯಿಂದ ನಿಮ್ಮ ತಲೆ ಬುರುಡೆಯನ್ನು ಚೆನ್ನಾಗಿ ಮಸಾಜ್ ಮಾಡಿ, ಸುಮಾರು 30 ನಿಮಿಷಗಳು ಕಳೆದ ನಂತರ ಹರ್ಬಲ್ ಕ್ಲೀನ್ಸರ್ ಉಪಯೋಗಿಸಿ ತೊಳೆಯಿರಿ.
*ಮಿಕ್ಕಿರುವ ಎಣ್ಣೆಯನ್ನು ಮತ್ತೊಂದು ಬಾರಿ ಉಪಯೋಗಿಸಲು ಹಾಗೇ ಎತ್ತಿಡಿ.
ದಾಸವಾಳ ಹೂವಿನ ಶಾಂಪು
*ದಾಸವಾಳದ ಇನ್ನೊಂದು ವಿಶೇಷ ಗುಣವೆಂದರೆ ನೊರೆಯನ್ನು ಉಂಟು ಮಾಡುವುದು. ಈ ಕಾರಣದಿಂದ ಇದನ್ನು ಶಾಂಪೂ ತಯಾರು ಮಾಡಲು ಬಳಸಬಹುದು.
*ದಾಸವಾಳ ಹೂವು ಮತ್ತು ದಾಸವಾಳ ಗಿಡದ ಎಲೆಗಳನ್ನು 1:3 ಅನುಪಾತದಲ್ಲಿ ತೆಗೆದುಕೊಳ್ಳಿ. *ಉದಾರಣೆಗೆ 5 ದಾಸವಾಳ ಹೂವು ತೆಗೆದುಕೊಂಡರೆ, 15 ದಾಸವಾಳ ಗಿಡದ ಎಲೆಗಳು.
*ಒಂದು ಪ್ಯಾನ್ ನಲ್ಲಿ ನೀರು ಹಾಕಿ ಒಲೆ ಮೇಲಿಟ್ಟು ದಾಸವಾಳ ಗಿಡದ ಎಲೆಗಳು ಮತ್ತು ಹೂವುಗಳನ್ನು 5 ನಿಮಿಷಗಳವರೆಗೆ ಚೆನ್ನಾಗಿ ಕುದಿಸಿ.
*ನಂತರ ಮಿಕ್ಸರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
*ಮಿಕ್ಸರ್ ಗೆ ಸ್ವಲ್ಪ ಕಡಲೆ ಹಿಟ್ಟು ಬೇಕಾದರೂ ಸೇರಿಸಿ ರುಬ್ಬಿಕೊಳ್ಳಬಹುದು.
*ಈಗ ನಿಮ್ಮ ಸಾವಯುವ ದಾಸವಾಳ ಶಾಂಪು ತಲೆ ಕೂದಲಿಗೆ ಹಚ್ಚಲು ತಯಾರಾಗಿದೆ.
ಆರೋಗ್ಯಕರ ನೆತ್ತಿಗೆ ದಾಸವಾಳ ಮತ್ತು ಆಮ್ಲ ಹೇರ್ ಮಾಸ್ಕ್
*ನಿಮಗೆಲ್ಲಾ ತಿಳಿದಿರುವ ಹಾಗೆ ಆಮ್ಲ ಕೂದಲಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ದಾಸವಾಳ ಮತ್ತು ಆಮ್ಲದ ಹೇರ್ ಮಾಸ್ಕ್ ತಯಾರು ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.
*ಮೊದಲಿಗೆ ದಾಸವಾಳ ಪುಡಿಯನ್ನು ಆಮ್ಲ ಪುಡಿ ಜೊತೆಗೆ ಸಮ ಪ್ರಮಾಣದಲ್ಲಿ ತೆಗೆದುಕೊಂಡು *ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.
*ದಾಸವಾಳ ಪುಡಿಯನ್ನು ಸುಲಭವಾಗಿ ನೀವು ಬ್ಯೂಟಿ ಸ್ಟೋರ್ ಗಳಲ್ಲಿ ಖರೀದಿಸಬಹುದು.
*ಈ ಎರಡು ಪುಡಿಗಳನ್ನು ಮಿಶ್ರಣ ಮಾಡಿದ ನಂತರ ನೀರು ಹಾಕಿ ಚೆನ್ನಾಗಿ ಕಲಸಿ.
ಅಲೋಪೆಸಿಯ ಸಮಸ್ಯೆಯಿಂದ ಬಳಲುತ್ತಿರುವವರು ಈ ವಿಧಾನವನ್ನು ಅನುಸರಿಸಬಹುದು
*5 ದಾಸವಾಳ ಹೂವುಗಳು ಮತ್ತು ಎಲೆಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ತಲೆಯ ಯಾವ ಭಾಗ ಅಲೋಪೆಸಿಯಾ ಸಮಸ್ಯೆಗೆ ಒಳಗಾಗಿದೆಯೋ ಅಲ್ಲಿ ಈ ಪೇಸ್ಟನ್ನು ಹಚ್ಚಿ.
*ಸುಮಾರು 2 – 3 ಗಂಟೆಗಳ ಕಾಲ ಹಾಗೆ ಬಿಡಿ.
*ನಂತರ ನಿಮ್ಮ ಕೂದಲನ್ನು ದಾಸವಾಳ ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
*ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಖಾಲಿ ಇರುವ ಜಾಗದಲ್ಲಿ ಮತ್ತೆ ಕೂದಲನ್ನು ಪಡೆಯಬಹುದು.